ನನ್ನ ಕಣ್ಮುಂದೆಯೇ ಹುಡುಗನಿಗೆ
ತುಂಬುಯೌವನೆಯಿಂದ ಕಪಾಳಮೋಕ್ಷ.
"ಕಣ್ಣಾರೆ ಕಂಡರೂ ಮುಟ್ಟಿ ನೋಡು"
ಎಂಬ ಗಾದೆ ಅವನೇ ಬರೆದಿದ್ದು..!
ಮಧುರ ಕಂಠದ ಹಾಡುಹಕ್ಕಿಗೆ
ತನ್ನ ಶೈಲಿ ಬೇಜಾರಾಗಿ
ಒಮ್ಮೆ ಕರ್ಕಶವಾಗಿ ಕೂಗಿತು.
ನಂತರದಲ್ಲಿ ಅದು 'ಕಾಗೆ'ಯಂತಲೇ ಮನೆಮಾತಾಯಿತು..!
ಹುಡುಗಿಗೆ ಹುಡುಗ ಸಿಕ್ಕ.
ಮರಿಹಕ್ಕಿಗೆ ರೆಕ್ಕೆ ಸಿಕ್ಕಿತು.
ಉಳಿದಿದ್ದು ತಾಯ್ತಂದೆಯರ
ಖಾಲಿ ಮನ-ಮನೆಗಳು ಮಾತ್ರ.
ಗಾಂಧಿಯಂದ "ಕೆಟ್ಟದ್ದನ್ನು ಮಾಡಬೇಡ".
ಅದನ್ನು ಓದಿದ ಕೂಸು
"ಕೆಟ್ಟದ್ದು" ಪದಕ್ಕೆ ಅರ್ಥ ತಿಳಿಯಲು ಹೋಗಿ
ಸಿಗರೇಟು ಕಲಿಯಿತು..!
ಗೋಡೆಗೆ ಆತ ಹೊಡೆದ ಮೊಳೆಗೆ
ಮರುದಿನ ಕುಂಕುಮದಿಂದ ಕಂಗೊಳಿಸುತ್ತಿದ್ದ
ಅವನ ಭಾವಚಿತ್ರವೇ ನೇತುಬಿದ್ದಿದ್ದು
ದುರಂತವಲ್ಲದೇ ಇನ್ನೇನು..?!
ತುಂಬುಯೌವನೆಯಿಂದ ಕಪಾಳಮೋಕ್ಷ.
"ಕಣ್ಣಾರೆ ಕಂಡರೂ ಮುಟ್ಟಿ ನೋಡು"
ಎಂಬ ಗಾದೆ ಅವನೇ ಬರೆದಿದ್ದು..!
ಮಧುರ ಕಂಠದ ಹಾಡುಹಕ್ಕಿಗೆ
ತನ್ನ ಶೈಲಿ ಬೇಜಾರಾಗಿ
ಒಮ್ಮೆ ಕರ್ಕಶವಾಗಿ ಕೂಗಿತು.
ನಂತರದಲ್ಲಿ ಅದು 'ಕಾಗೆ'ಯಂತಲೇ ಮನೆಮಾತಾಯಿತು..!
ಹುಡುಗಿಗೆ ಹುಡುಗ ಸಿಕ್ಕ.
ಮರಿಹಕ್ಕಿಗೆ ರೆಕ್ಕೆ ಸಿಕ್ಕಿತು.
ಉಳಿದಿದ್ದು ತಾಯ್ತಂದೆಯರ
ಖಾಲಿ ಮನ-ಮನೆಗಳು ಮಾತ್ರ.
ಗಾಂಧಿಯಂದ "ಕೆಟ್ಟದ್ದನ್ನು ಮಾಡಬೇಡ".
ಅದನ್ನು ಓದಿದ ಕೂಸು
"ಕೆಟ್ಟದ್ದು" ಪದಕ್ಕೆ ಅರ್ಥ ತಿಳಿಯಲು ಹೋಗಿ
ಸಿಗರೇಟು ಕಲಿಯಿತು..!
ಗೋಡೆಗೆ ಆತ ಹೊಡೆದ ಮೊಳೆಗೆ
ಮರುದಿನ ಕುಂಕುಮದಿಂದ ಕಂಗೊಳಿಸುತ್ತಿದ್ದ
ಅವನ ಭಾವಚಿತ್ರವೇ ನೇತುಬಿದ್ದಿದ್ದು
ದುರಂತವಲ್ಲದೇ ಇನ್ನೇನು..?!
ಮತ್ತಷ್ಟು ಹಾಯ್ಕುಗಳು. ಆದರೂ ಮೊದಲಿನ ಹಾಯ್ಕುಗಳಷ್ಟು ಪರಿಣಾಮಕಾರಿಯಲ್ಲ. ಚೆನ್ನಾಗಿದೆ :)
ReplyDeleteನಂಗೂ ಹಂಗೇ ಅನ್ನಿಸ್ತು.. :) Thanks Bhat jee.. :)
Delete