About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Sunday, January 29, 2012

ಓ ನನ್ನಮ್ಮನ ಸ್ಲಿಮ್ ಸೊಸೆಯೇ..

ಓ ನನ್ನಮ್ಮನ ಸ್ಲಿಮ್ ಸೊಸೆಯೇ..
ತಪ್ಪಿಯೂ ನಿನ್ನ ಸೊಂಟಕ್ಕೆ Tyre ಬರಿಸಿಕೊಳ್ಳದಿರು..!

ಬಹುಷಃ ಅಮ್ಮ ಯೋಗ ಮಾಡಲು ಕಲಿತಿದ್ದು
ನಿನ್ನ ಸಿಂಹಿಣಿ ನಡು ನೋಡಿಯೇ ಇರಬೆಕು..
ನಾನೊಮ್ಮೆ ಕದ್ದು ನೋಡಿದ್ದೆ.. ನನ್ನಮ್ಮ
ನಿನ್ನ ಸೊಂಟ ಕದ್ದು ನೋಡುವುದನ್ನ..!

ಅವತ್ತಿನಿಂದಲೇ ಇರಬೇಕು..
ಅಮ್ಮನ ಸೊಂಟ ಇಳಿದಿದ್ದರೂ
ನಿನ್ನ ಕಟಿಯೆಡೆಗಿನ ಕಳ್ಳನೋಟ,
ವ್ಯಾಯಾಮದೆಡೆಗಿನ ಸಾಧಕ ನೋಟ
ಏರುತ್ತಲೇ ಹೋಗಿದ್ದು..!

ಇತ್ತ ನಂಗೂ,ಅಪ್ಪನಿಗೂ ಅಲ್ಲಲ್ಲೇ ಮುಸಿನಗು..
ಏಕೆಂದರೆ..
ತೆಳು ಸೊಂಟದಾಸೆಯಿಂದ ಮನೆಕೆಲಸವನ್ನೆಲ್ಲಾ
ನಿನಗೆ ಹಚ್ಚದೇ ತಾನೊಬ್ಬಳೇ
ಮಾಡಿ ಮುಗಿಸುತ್ತೇನೆಂಬ ಹಠ ಅಮ್ಮನದು..!

ಹೀಗೇ ದಿನವಿಡೀ ದುಡಿದು,
ಯೋಗ,ಅಭ್ಯಂಜನಾದಿಗಳನ್ನು ಬಿಡುವಿರದೇ
ಕಡಿದು ಗುಡ್ಡೆ ಹಾಕಿದ್ದಕ್ಕೆ..
ಅಮ್ಮನಿಗೆ ಸಿಕ್ಕ ಫಲ..
ಸೊಂಟ ಒಂದು Round ಕಮ್ಮಿಯಾಗಿದ್ದು..!
ನನ್ನಪ್ಪನ ಮುದ್ದು ಡುಮ್ಮಿ ಕೊನೆಗೂ ಸುಮ್ಮನಾಗಿದ್ದು..!

ಆದರೆ.. ಪಟ್ಟ ಅನಾವಶ್ಯಕ ಕಷ್ಟಕ್ಕೆ
ಜ್ವರ,ಬಳಲಿಕೆಯಿಂದ ನರಳಿ,
ಹಾಸಿಗೆ ಹಿಡಿದಾಕೆ Recover
ಆದ ತಕ್ಷಣ.. ಕಾಫಿ ಮಾಡುವಾಗ
ನನ್ನೊಬ್ಬನನ್ನೇ ಅಂತ್ಯಾಕ್ಷರಿಗೆ ಕರೆದು ಮೊದಲು
ಶುರು ಮಾಡಿದ ಹಾಡು..

ಸೊಂಟದ ವಿಷ್ಯ.. ಬ್ಯಾಡವೋ ವಿಶ್ವ..!!

5 comments:

 1. ಆಹಾ ಈ ಸೊಂಟದ ವಿಷ್ಯ ನನಗೆ ಬ್ಯಾಡ ಗೆಳೆಯ, ಯಾಕೆಂದರೆ ನನ್ನದು ಬುಲ್ಡೋಜರ್ರು ಸೊಂಟ!

  ಭಲೇ ತಮಾಷೆಯಾಗಿ ಸೊಂಟವನ್ನು ಟಚ್ ಮಾಡಿದ ನಿಮ್ಮ ಕಾವ್ಯ ನನಗೆ ಇಷ್ಟವಾಯಿತು.

  ಹಾಸಿಗೆ ಹಿಡಿದ ಆ ಹಿರಿಯ ಮುತ್ತೈದೆ ಬೇಗ ಚೇತರಿಸಿಕೊಳ್ಳಲಿ!

  ನನ್ನ ಬ್ಲಾಗಿಗೂ ಸ್ವಾಗತ.

  ReplyDelete
 2. ವಿಶ್ವ ಚೆನ್ನಾಗಿದೆ. ಆದರೆ ಇದಕ್ಕಿಂತ ಹೆಚ್ಚು ನಿರೀಕ್ಷೆಯಿದೆ ನಿನ್ನ ಕವನಗಳಲ್ಲಿ.

  ReplyDelete
 3. ಓಹ್! ಸೊಂಟದ ಬಗ್ಗೆ ಬರೆದ ಕವನ ಸೊಗಸಾಗಿದೆ..ಸೊಸೆಯ ಸೊಂಟ ಅತ್ತೆಗೆ ಸ್ಪೂರ್ತಿ ಇದು ಹೊಸ ಕಾನ್ಸೆಪ್ಟ್ ಅನ್ನಿಸುತ್ತೆ..

  ReplyDelete
 4. ವವ್ವಾ ವವ್ವಾ ... ಮಸ್ತೋ ಮಸ್ತ್

  ReplyDelete