ನಾ ಕೊಟ್ಟ ನೀಲಿ ಸೀರೆಗೆ
ಸೆಂಟು ತಾಗಿಸಬೇಡ..
ನಿನ್ನ ಮೈಗಂಧವೇ ಚಂದ..
ಆ ಘಮಕ್ಕೆ ಪಲ್ಲು ಜಾರೀತು ಜೋಕೆ..!
ಅದೆಷ್ಟು ಒಪ್ಪವಾಗಿ ನೇಯುತ್ತೀಯ ನೆರಿಗೆಯನ್ನ..
ನಾಜೂಕು ರಾಣಿ..
ನನ್ನ ಇಸ್ತ್ರಿ ಮಾಡಿದ ಪ್ಯಾಂಟೂ ಅದರ ಮುಂದೆ
ಮಾಸಲು ಗೋಣಿ..!
ನಾನೇ ಹೊಲಿಸಿದ ಬ್ಲೌಸು
ನಿಂಗೆ ಸರಿಯಾಗುತ್ತೋ ಇಲ್ಲವೋ
ಎಂಬ ಅನುಮಾನ..
ಕನಸಲ್ಲೂ ಕದ್ದು ನೋಡಲಿಲ್ಲವಲ್ಲ
ನಿನ್ನೆದೆಯನ್ನ..!
ಕಾಮವಿಲ್ಲದ ಪ್ರೀತಿ
ಕಾವಿ ತೊಟ್ಟ ಯೋಗಿಯಷ್ಟೇ ಪವಿತ್ರ ಹುಡುಗೀ..!!
ಆದರೆ..
ಯೋಗಿಗೂ ಹಸಿವೆಯಾದಾಗ
ಹಣ್ಣು ತಿನ್ನುವ ಹಂಬಲವಿರುತ್ತದೆ..
ಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!
ನಿರೀಕ್ಷೆಯಲ್ಲಿ...
ಸೆಂಟು ತಾಗಿಸಬೇಡ..
ನಿನ್ನ ಮೈಗಂಧವೇ ಚಂದ..
ಆ ಘಮಕ್ಕೆ ಪಲ್ಲು ಜಾರೀತು ಜೋಕೆ..!
ಅದೆಷ್ಟು ಒಪ್ಪವಾಗಿ ನೇಯುತ್ತೀಯ ನೆರಿಗೆಯನ್ನ..
ನಾಜೂಕು ರಾಣಿ..
ನನ್ನ ಇಸ್ತ್ರಿ ಮಾಡಿದ ಪ್ಯಾಂಟೂ ಅದರ ಮುಂದೆ
ಮಾಸಲು ಗೋಣಿ..!
ನಾನೇ ಹೊಲಿಸಿದ ಬ್ಲೌಸು
ನಿಂಗೆ ಸರಿಯಾಗುತ್ತೋ ಇಲ್ಲವೋ
ಎಂಬ ಅನುಮಾನ..
ಕನಸಲ್ಲೂ ಕದ್ದು ನೋಡಲಿಲ್ಲವಲ್ಲ
ನಿನ್ನೆದೆಯನ್ನ..!
ಕಾಮವಿಲ್ಲದ ಪ್ರೀತಿ
ಕಾವಿ ತೊಟ್ಟ ಯೋಗಿಯಷ್ಟೇ ಪವಿತ್ರ ಹುಡುಗೀ..!!
ಆದರೆ..
ಯೋಗಿಗೂ ಹಸಿವೆಯಾದಾಗ
ಹಣ್ಣು ತಿನ್ನುವ ಹಂಬಲವಿರುತ್ತದೆ..
ಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!
ನಿರೀಕ್ಷೆಯಲ್ಲಿ...
ವಿಶ್ವಣ್ಣ ನಿಮ್ಮ ಶೈಲಿ ನಿಜಕ್ಕೂ ವಿಶಿಷ್ಠವಾದುದು.. ಹಸಿ ಹಸಿಯಾದ ಭಾವಗಳಿಗೆ ಬಣ್ಣದುಡುಗೆ ತೊಡಿಸಿ ಸುಂದರವಾಗಿ ಅಲಂಕರಿಸುತ್ತೀರಿ, ನಲ್ಲೆಗೆ ಸೀರೆ ಉಡಿಸುವಂತೆಯೇ..;) ಎಂತಹ ನಾಜೂಕಿನ ಭಾವಗಳನ್ನು ಹೆಕ್ಕಿದ್ದೀರಿ ನಿಜಕ್ಕೂ ಸಾಹಿತ್ಯ ಎಷ್ಟು ಸೃಜನಶೀಲವಾಗಬಹುದೆಂದು ನಿಮ್ಮ ಬರಹಗಳನ್ನು ನೋಡಿಯೇ ಖುಷಿಯಾಗುತ್ತದೆ..
ReplyDeleteಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!
ಈ ಸಾಲುಗಳಲ್ಲಿನ ಪಂಚ್ ನಿಜಕ್ಕೂ ಅದ್ಭುತ.. ತುಂಬಾ ಹಿಡಿಸಿತು..:)))
Wowwww :)
ReplyDelete