ಇಪ್ಪತ್ತೆರಡು ವರ್ಷಕ್ಕೇ
ನೆನಪುಗಳ ಮೆಲುಕು ಮೆಲ್ಲುವ
ಮನಸಿನ ಚಟಕ್ಕೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?
ಅಷ್ಟಕ್ಕೂ ಇಷ್ಟು ಪರ್ವಗಳಲ್ಲಿ ಆಗಿದ್ದಾದರೂ ಏನು?
ಮೈ ನೆಂದಿದ್ದು,ಬೆವರಿದ್ದು,
ಶಾಲೆಗೆ ಹೋಗದಿರಲು ಭಗೀರಥ ಪ್ರಯತ್ನ ಮಾಡಿದ್ದು..
ಕಂತ್ರಿ ನಾಯಿ ಸಾಕಿದ್ದು..
ಮತ್ತು ಮೀಸೆ ಮೂಡುವ ಮುನ್ನವೇ ಪೆನ್ನಿನಲ್ಲಿ ಚಿಗುರಿಸಿಕೊಂಡಿದ್ದು..!
ಕಣ್ಣ ಮುಂದೆ ಠುಸ್ಸೆಂದ ಪಟಾಕಿ
ಕಾಲ ಬಳಿ ಢಂ ಎಂದಿತ್ತು..!
ಅವತ್ತು ಅಪ್ಪ ಕೊಟ್ಟ ಹೊಡೆತ ಕೊನೆಯದೆಂದು
ಮೊದಲೇ ತಿಳಿದಿದ್ದರೆ..
ಮನೆಯಲ್ಲಿ ಹಟ ಮಾಡಿ ಪಾಯಸ ಮಾಡಿಸುತ್ತಿದ್ದೆ..!!
ಒಡೆದ ಕಾಲಿಗೆ ಮುಲಾಮು ಮೆತ್ತಿದ್ದೆ,
ಗಡ್ಡ ಬಂದಾಗೆ ಕೇಕೆ ಹಾಕಿದ್ದೆ..!
ಮರುದಿನದ ಬಿಸಿಲಿಗೆ ತಲೆಯಲ್ಲೊಂದು
ಬೆಳ್ಳಿಕೇಶ ಕೋರೈಸಿದಾಗ ಕಣ್ಣಲ್ಲಿ ರಕ್ತ ಸುರಿಸಿದ್ದೆ..!
ವಂಶಪಾರಂಪರ್ಯವೋ,ಸೋಪಿನ ಕೆಮಿಕಲ್ಲೋ..ಏನಾದರೂ
ಆಗ ನಂಗಿನ್ನೂ ಹದಿನೈದು..
ಮೇಲಾಗಿ
ಎದುರುಮನೆ ಜೀಜಿಂಬೆ, ಹುಡುಗಿಯಾಗಿ ಎದುರು ಕಾಣೋ ವಯಸ್ಸು..!!
ಅಲ್ಲಿಂದಿಲ್ಲಿಗೆ ಬದುಕು
ಸೂರ್ಯನ ಏಳು ಕುದುರೆಗಳ ಓಟ..
ಏಳು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟ..
ಗೊಬ್ಬರ ಒಂದು ಬಿಟ್ಟು
ಸುಖ,ನೋವು,ಮಳೆ,ಉಲ್ಲಾಸ,
ಹುಡುಗಿ ಬಿಟ್ಟು ಹೋದ ಗಾಯ..
ಅಷ್ಟನ್ನೂ ಹಸಿ ಹಸಿಯಾಗಿ ತಿಂದು ಕೂತಿದೆ ಮನಸು..
ಮತ್ತದೇ ಪ್ರಶ್ನೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?
ನೆನಪುಗಳ ಮೆಲುಕು ಮೆಲ್ಲುವ
ಮನಸಿನ ಚಟಕ್ಕೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?
ಅಷ್ಟಕ್ಕೂ ಇಷ್ಟು ಪರ್ವಗಳಲ್ಲಿ ಆಗಿದ್ದಾದರೂ ಏನು?
ಮೈ ನೆಂದಿದ್ದು,ಬೆವರಿದ್ದು,
ಶಾಲೆಗೆ ಹೋಗದಿರಲು ಭಗೀರಥ ಪ್ರಯತ್ನ ಮಾಡಿದ್ದು..
ಕಂತ್ರಿ ನಾಯಿ ಸಾಕಿದ್ದು..
ಮತ್ತು ಮೀಸೆ ಮೂಡುವ ಮುನ್ನವೇ ಪೆನ್ನಿನಲ್ಲಿ ಚಿಗುರಿಸಿಕೊಂಡಿದ್ದು..!
ಕಣ್ಣ ಮುಂದೆ ಠುಸ್ಸೆಂದ ಪಟಾಕಿ
ಕಾಲ ಬಳಿ ಢಂ ಎಂದಿತ್ತು..!
ಅವತ್ತು ಅಪ್ಪ ಕೊಟ್ಟ ಹೊಡೆತ ಕೊನೆಯದೆಂದು
ಮೊದಲೇ ತಿಳಿದಿದ್ದರೆ..
ಮನೆಯಲ್ಲಿ ಹಟ ಮಾಡಿ ಪಾಯಸ ಮಾಡಿಸುತ್ತಿದ್ದೆ..!!
ಒಡೆದ ಕಾಲಿಗೆ ಮುಲಾಮು ಮೆತ್ತಿದ್ದೆ,
ಗಡ್ಡ ಬಂದಾಗೆ ಕೇಕೆ ಹಾಕಿದ್ದೆ..!
ಮರುದಿನದ ಬಿಸಿಲಿಗೆ ತಲೆಯಲ್ಲೊಂದು
ಬೆಳ್ಳಿಕೇಶ ಕೋರೈಸಿದಾಗ ಕಣ್ಣಲ್ಲಿ ರಕ್ತ ಸುರಿಸಿದ್ದೆ..!
ವಂಶಪಾರಂಪರ್ಯವೋ,ಸೋಪಿನ ಕೆಮಿಕಲ್ಲೋ..ಏನಾದರೂ
ಆಗ ನಂಗಿನ್ನೂ ಹದಿನೈದು..
ಮೇಲಾಗಿ
ಎದುರುಮನೆ ಜೀಜಿಂಬೆ, ಹುಡುಗಿಯಾಗಿ ಎದುರು ಕಾಣೋ ವಯಸ್ಸು..!!
ಅಲ್ಲಿಂದಿಲ್ಲಿಗೆ ಬದುಕು
ಸೂರ್ಯನ ಏಳು ಕುದುರೆಗಳ ಓಟ..
ಏಳು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟ..
ಗೊಬ್ಬರ ಒಂದು ಬಿಟ್ಟು
ಸುಖ,ನೋವು,ಮಳೆ,ಉಲ್ಲಾಸ,
ಹುಡುಗಿ ಬಿಟ್ಟು ಹೋದ ಗಾಯ..
ಅಷ್ಟನ್ನೂ ಹಸಿ ಹಸಿಯಾಗಿ ತಿಂದು ಕೂತಿದೆ ಮನಸು..
ಮತ್ತದೇ ಪ್ರಶ್ನೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?
ಚೆನ್ನಾಗಿದೆ ವಿಶ್ವ. ನಿನ್ನ ಕವನ ಓದುವುದನ್ನು ಕಲಿಸಿಬಿಡುತ್ತದೆ. ಒಳ್ಳೆಯ ಕೆಲಸ ಅದು.
ReplyDeletenice kavana!!
ReplyDelete:-)
ms
ವಿಶ್ವಣ್ಣ ನಾನು ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದೇನೆ ಮಾರಾಯ್ರೆ.. ತುಂಬಾ ನೈಜವೆನಿಸುವಂತೆ ಬರೆಯುತ್ತೀರಿ.. ನಿಮ್ಮ ಶೈಲಿಯೇ ನಿಮಗೆ ದೊಡ್ಡ ಗುಣಾತ್ಮಕ ಅಂಶ..:))) ಬಾಲ್ಯದಿಂದಿಡಿದು ಯೌವ್ವನದವರೆಗೂ ಕಂಡ ಪರಿಪಾಟಲುಗಳು ಮತ್ತು ಅನುಭವಿಸಿದ ಖುಷಿಯ ಕ್ಷಣಗಳು, ಹುಡುಗಾಟದ ಆಟಗಳು ಮತ್ತು ಅನುಭವಿಸಿದ ನೋವುಗಳು ಎಲ್ಲವನ್ನು ಮನಮುಟ್ಟುವಂತೆ ಕವಿತೆಯಲ್ಲಿ ಬಿಂಬಿಸಿದ್ದೀರಿ.. ತುಂಬಾ ಹಿಡಿಸಿತು..:)))
ReplyDeleteಇಷ್ಟು ವರ್ಷಗಳಲ್ಲಿ ಆದದ್ದಾದರೂ ಏನು ಎಂದು ನೆನೆದರೆ....ಬದುಕು ಪೂರ್ತಿ ಇಪ್ಪತ್ತೆರಡು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟಗಳ ನೆನಪೇ ಹೆಚ್ಚು ಕಾಡುತ್ತದಲ್ವಾ..??
ReplyDeleteಕಾಡುವ ಬರಹಗಳೆಂದರೆ ಹೀಗೇ ಓದಿ ಮುಗಿದ ಮೇಲೂ ಮನಸ್ಸು ಓದುತ್ತಲೇ ಇರುತ್ತದೆ...
ಇಷ್ಟವಾಯಿತು ಬರಹ.
yen anna full feelings.........mast iddu..:-)
ReplyDeleteyo man.. nice one
ReplyDelete