ನೀನೊಮ್ಮೆ ಸಿಕ್ಕಿಬಿಡು ತಾಳಿಕಟ್ಟಲು..
ಕಾಫಿ ಬಟ್ಟಲಿನಿಂದ ಮಗುವಿನ ಉಚ್ಚೆಯ
ತೊಟ್ಟಿಲ ತನಕ
ಎಲ್ಲವನ್ನೂ ತೊಳೆಯುತ್ತೇನೆ..!
ನನ್ನಪ್ಪನೂ ಹೀಗೇ ಹೇಳಿರಬೇಕು
ನನ್ನಮ್ಮನಿಗೆ..
ಈಗಲೂ ಕಾಫಿ ಬಟ್ಟಲ ಕೆಲಸ ನನ್ನಪ್ಪನದೇ..
ಬಚ್ಚಲೂ ಸೇರಿ..!
ಹಬ್ಬ ಪಾರ್ಟಿಗಳ ನಿನ್ನುದ್ದ ಬೆರಳಿಗೆ
ಗೋರಂಟಿ ಗೀರನ್ನು ಹಚ್ಚೆಯಂತೆ ಹಚ್ಚುತ್ತೇನೆ..
ವಕ್ರವಾದರೆ ಚೀರಬೇಡ..
ನಿನ್ನಂದದ ಮುಂಗುರುಳೂ ವಕ್ರವೇ..
ಹುಡುಗಿಯ ಮೊಬೈಲಿನಿಂದ
ಎಂದೋ ಒಂದೊಂದು ಮೆಸೇಜು ಬಂದರೆ
ರಾತ್ರಿ ಊಟ ಹಾಕದೇ ಇರಬೇಡ..
ಪಕ್ಕದ ಮನೆಯವನ ಪರಸ್ತ್ರೀ ನೀನು..
ನಿನ್ನ ಬಿಟ್ಟು ನಂಗೆಲ್ಲರೂ ತಂಗಿಯರೇ..!!
ಹಾಗೆಂದು..
ತವರಿಗೆ ಬಾ ತಂಗಿ ಎಂದಾಗ
ಊಟ ಬಿಟ್ಟು ಓಡಬೇಡ..
ಹಸಿದ ನಿನ್ನ ಮುಖ ನೋಡಿ
ವರದಕ್ಷಿಣೆ ಕಿರುಕುಳ ಎಂದುಕೊಂಡಾರು ನಿಮ್ಮಮ್ಮ..!
ಇವೆಲ್ಲ ಸಾಕು..
ನಂಗೊಂದು ಮಗು ಬೇಕು..!!
..........
(ಮಾತು ಮುಗಿದ ಸಮಯ..!).
ಕಾಫಿ ಬಟ್ಟಲಿನಿಂದ ಮಗುವಿನ ಉಚ್ಚೆಯ
ತೊಟ್ಟಿಲ ತನಕ
ಎಲ್ಲವನ್ನೂ ತೊಳೆಯುತ್ತೇನೆ..!
ನನ್ನಪ್ಪನೂ ಹೀಗೇ ಹೇಳಿರಬೇಕು
ನನ್ನಮ್ಮನಿಗೆ..
ಈಗಲೂ ಕಾಫಿ ಬಟ್ಟಲ ಕೆಲಸ ನನ್ನಪ್ಪನದೇ..
ಬಚ್ಚಲೂ ಸೇರಿ..!
ಹಬ್ಬ ಪಾರ್ಟಿಗಳ ನಿನ್ನುದ್ದ ಬೆರಳಿಗೆ
ಗೋರಂಟಿ ಗೀರನ್ನು ಹಚ್ಚೆಯಂತೆ ಹಚ್ಚುತ್ತೇನೆ..
ವಕ್ರವಾದರೆ ಚೀರಬೇಡ..
ನಿನ್ನಂದದ ಮುಂಗುರುಳೂ ವಕ್ರವೇ..
ಹುಡುಗಿಯ ಮೊಬೈಲಿನಿಂದ
ಎಂದೋ ಒಂದೊಂದು ಮೆಸೇಜು ಬಂದರೆ
ರಾತ್ರಿ ಊಟ ಹಾಕದೇ ಇರಬೇಡ..
ಪಕ್ಕದ ಮನೆಯವನ ಪರಸ್ತ್ರೀ ನೀನು..
ನಿನ್ನ ಬಿಟ್ಟು ನಂಗೆಲ್ಲರೂ ತಂಗಿಯರೇ..!!
ಹಾಗೆಂದು..
ತವರಿಗೆ ಬಾ ತಂಗಿ ಎಂದಾಗ
ಊಟ ಬಿಟ್ಟು ಓಡಬೇಡ..
ಹಸಿದ ನಿನ್ನ ಮುಖ ನೋಡಿ
ವರದಕ್ಷಿಣೆ ಕಿರುಕುಳ ಎಂದುಕೊಂಡಾರು ನಿಮ್ಮಮ್ಮ..!
ಇವೆಲ್ಲ ಸಾಕು..
ನಂಗೊಂದು ಮಗು ಬೇಕು..!!
..........
(ಮಾತು ಮುಗಿದ ಸಮಯ..!).
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ಗೂ
ReplyDeleteಇದಕ್ಕೂ ಹೇಳುವ ಶೈಲಿಯ ವ್ಯತ್ಯಾಸ ಇರಬಹುದು, ಭಾವ ಒಂದೇ..
ಪ್ರಾಮಾಣಿಕತೆಯ ಪ್ರೀತಿ, ಕವನದ ಹೊಸತನ ಎರಡೂ ಚೆನ್ನಾಗಿದೆ. ಎಲ್ಲಾ ಓದಿದ್ದೇನೆ, ಎಲ್ಲಕ್ಕೂ ಉತ್ತರಿಸಲು ಸ್ವಲ್ಪ ಸಮಯ ಕೇಳುತ್ತಾ ಇದ್ದೇನೆ.,
ಬರೀತಾ ಇರು.. ಒಳ್ಲೇದಾಗಲಿ .. ಬ್ಲಾಗ್ ಮಾಡಿದ್ದು ತುಂಬಾ ಖುಷಿ.
Thanks a lott Bhatre.. :)
Deletesuper ide guru :)
ReplyDelete