ಮುಗಿಲು ಮಬ್ಬಾಗಿ ಮಳೆಚೆಲ್ಲಿ
ಅಳಿದುಳಿದ ಮರದನಿ
ಕೊನೆಗೊಳ್ಳುವ ಮುಂಚೆ..
ಏಡಿಗೂಡ ಮಲಗಿಸಿಕೊಂಡ
ತೋಟದಾ ಹಸಿಮಣ್ಣಿಗೆ
ಮಣಿಗೆಜ್ಜೆಯ ಹೆಜ್ಜೆಯಿಕ್ಕಿದಳು ಅವಳು..
ನೆಲಸವರಿದ ಕೆಂಪುದಾವಣಿಯಂಚು
ಕೊಂಚ ತೋಯ್ದಿತ್ತು..
ನಿನ್ನೆ ಜಾತ್ರೆಯಲ್ಲಿ ಕೊಂಡ
ಹಳದಿಗಾಜಿನ ಬಳೆಗಳಿಗೆ
ಒರಗಿ ನಿದ್ರಿಸಲೊಂದು
ಹೊಸ ಕೈ ಸಿಕ್ಕಿದ ಸಂಭ್ರಮವಿತ್ತು..!
ಗೂಡಿನಿಂದಾಚೆ ಬಂದ ಏಡಿಯ
ಕಸಕ್ಕನೆ ಒಳಗೋಡಿಸಿತ್ತವಳ ಮುದ್ದು ಪಾದ..
ನಡೆದಳು ಇಂಚಿಂಚಾಗಿ:
ಬಾಗಿ ಮುತ್ತಿಟ್ಟು ಜೇಡದ ಇಬ್ಬನಿ ಮನೆಯ.
ನಡೆದಳು ಗುನುಗುತ್ತ:
ಅಡಿಕೆ ಮರದ ಕೆಂಪಿರುವೆಗೆ ಗೊತ್ತಿಲ್ಲದ ಹಾಡೊಂದನ್ನ..
ಉದುರಡಿಕೆಯಾರಿಸುತ್ತ ನಿಂತ
ಅಪ್ಪ ಸಿಕ್ಕ ಪಕ್ಕ..
ಊಹೂಂ..
ಮಾತಾಡದೇ ಮುಂದೋಡಿದಳವಳು:
ಇನ್ನಷ್ಟು ಏಡಿಗಳ ಮನೆಗೋಡಿಸುತ್ತ.
ಮಲೆನಾಡಜಡಿಮಳೆಯುಡುಗೊರೆ
ಗೊಣ್ಣೆಯೊರೆಸುತ್ತ ನಿಂತ ತಮ್ಮ ಸಿಕ್ಕ ಮುಂದೆ..
ಇಲ್ಲ..
ಮತ್ತದೇ..
ಮಾತಾಡದೇ ಮುಂದುವರೆದಳು ಹುಡುಗಿ.
ಕೊನೆಗೂ ಬಂದಳವಳು
ತೋಟದ ಮೂಲೆಯಲ್ಲಿ ಹಾಸಿದ್ದ
ಗೋರಿಯ ಬಳಿಗೆ..
ಕಲ್ಲುಗೋರಿಗ್ಯಾವ ಮಳೆಚಳಿಯ ಭಯ?
ಮಲಗಿತ್ತು:
ರವಿಕಿರಣ,ಪಚ್ಚೆ ಪಾಚಿಗಳ
ಚುಚ್ಚಿಸಿಕೊಂಡು.
"ಸುಷುಮ್ನಾ"
ಗೋರಿಯಲ್ಲಿದ್ದ ತನ್ನ ಹೆಸರ
ಅಷ್ಟು ಮುದ್ದಾಗಿ ಕೆತ್ತಿಕೊರೆದ
ಗಾರೆಯವನಿಗೊಂದು ಸಲಾಂ ಹೇಳಿ
ಪಾಚಿಪಕ್ಕದ ಖಾಲಿಗೆ
ಪುಟ್ಟಪಾದವಿಟ್ಟು ಗೋರಿಯೊಳಗೋಡಿದಳು
ನೆರಳಿಲ್ಲದ ಹುಡುಗಿ.....!
ನನ್ನ ಹುಡುಗಿ....
ಹೀಗೇ..
ಅವಳಿಲ್ಲದ ಕ್ಷಣದಿಂದಿಲ್ಲಿಯವರೆಗಲ್ಲದೆ ಮುಂದೂ..
ಪೆನ್ನ ಮೊನಚಲ್ಲಿ ಅವಳ ಮೂಡಿಸುತ್ತೇನೆ.
ಅವಳೋಡುವ ದಾರಿಯಲ್ಲಿ
ಕೇಡಿಯಲ್ಲ ಏಡಿಯೂ ಬೇಡ.
ಅವಳಲೊಂದೇ ಕೂಗು ನನ್ನದು..
ಮಡದಿಯಾಗದೇ ಮಡಿದೆ ನಿಜ.
ಮುಂದೆಂದೂ ಲೇಖನಿಯಂಚಿನಲ್ಲಿ
ಮೂಡದೇ ಮತ್ತೆ ಮಡಿಯದಿರು..
ಅಷ್ಟೇ...
ಅಳಿದುಳಿದ ಮರದನಿ
ಕೊನೆಗೊಳ್ಳುವ ಮುಂಚೆ..
ಏಡಿಗೂಡ ಮಲಗಿಸಿಕೊಂಡ
ತೋಟದಾ ಹಸಿಮಣ್ಣಿಗೆ
ಮಣಿಗೆಜ್ಜೆಯ ಹೆಜ್ಜೆಯಿಕ್ಕಿದಳು ಅವಳು..
ನೆಲಸವರಿದ ಕೆಂಪುದಾವಣಿಯಂಚು
ಕೊಂಚ ತೋಯ್ದಿತ್ತು..
ನಿನ್ನೆ ಜಾತ್ರೆಯಲ್ಲಿ ಕೊಂಡ
ಹಳದಿಗಾಜಿನ ಬಳೆಗಳಿಗೆ
ಒರಗಿ ನಿದ್ರಿಸಲೊಂದು
ಹೊಸ ಕೈ ಸಿಕ್ಕಿದ ಸಂಭ್ರಮವಿತ್ತು..!
ಗೂಡಿನಿಂದಾಚೆ ಬಂದ ಏಡಿಯ
ಕಸಕ್ಕನೆ ಒಳಗೋಡಿಸಿತ್ತವಳ ಮುದ್ದು ಪಾದ..
ನಡೆದಳು ಇಂಚಿಂಚಾಗಿ:
ಬಾಗಿ ಮುತ್ತಿಟ್ಟು ಜೇಡದ ಇಬ್ಬನಿ ಮನೆಯ.
ನಡೆದಳು ಗುನುಗುತ್ತ:
ಅಡಿಕೆ ಮರದ ಕೆಂಪಿರುವೆಗೆ ಗೊತ್ತಿಲ್ಲದ ಹಾಡೊಂದನ್ನ..
ಉದುರಡಿಕೆಯಾರಿಸುತ್ತ ನಿಂತ
ಅಪ್ಪ ಸಿಕ್ಕ ಪಕ್ಕ..
ಊಹೂಂ..
ಮಾತಾಡದೇ ಮುಂದೋಡಿದಳವಳು:
ಇನ್ನಷ್ಟು ಏಡಿಗಳ ಮನೆಗೋಡಿಸುತ್ತ.
ಮಲೆನಾಡಜಡಿಮಳೆಯುಡುಗೊರೆ
ಗೊಣ್ಣೆಯೊರೆಸುತ್ತ ನಿಂತ ತಮ್ಮ ಸಿಕ್ಕ ಮುಂದೆ..
ಇಲ್ಲ..
ಮತ್ತದೇ..
ಮಾತಾಡದೇ ಮುಂದುವರೆದಳು ಹುಡುಗಿ.
ಕೊನೆಗೂ ಬಂದಳವಳು
ತೋಟದ ಮೂಲೆಯಲ್ಲಿ ಹಾಸಿದ್ದ
ಗೋರಿಯ ಬಳಿಗೆ..
ಕಲ್ಲುಗೋರಿಗ್ಯಾವ ಮಳೆಚಳಿಯ ಭಯ?
ಮಲಗಿತ್ತು:
ರವಿಕಿರಣ,ಪಚ್ಚೆ ಪಾಚಿಗಳ
ಚುಚ್ಚಿಸಿಕೊಂಡು.
"ಸುಷುಮ್ನಾ"
ಗೋರಿಯಲ್ಲಿದ್ದ ತನ್ನ ಹೆಸರ
ಅಷ್ಟು ಮುದ್ದಾಗಿ ಕೆತ್ತಿಕೊರೆದ
ಗಾರೆಯವನಿಗೊಂದು ಸಲಾಂ ಹೇಳಿ
ಪಾಚಿಪಕ್ಕದ ಖಾಲಿಗೆ
ಪುಟ್ಟಪಾದವಿಟ್ಟು ಗೋರಿಯೊಳಗೋಡಿದಳು
ನೆರಳಿಲ್ಲದ ಹುಡುಗಿ.....!
ನನ್ನ ಹುಡುಗಿ....
ಹೀಗೇ..
ಅವಳಿಲ್ಲದ ಕ್ಷಣದಿಂದಿಲ್ಲಿಯವರೆಗಲ್ಲದೆ ಮುಂದೂ..
ಪೆನ್ನ ಮೊನಚಲ್ಲಿ ಅವಳ ಮೂಡಿಸುತ್ತೇನೆ.
ಅವಳೋಡುವ ದಾರಿಯಲ್ಲಿ
ಕೇಡಿಯಲ್ಲ ಏಡಿಯೂ ಬೇಡ.
ಅವಳಲೊಂದೇ ಕೂಗು ನನ್ನದು..
ಮಡದಿಯಾಗದೇ ಮಡಿದೆ ನಿಜ.
ಮುಂದೆಂದೂ ಲೇಖನಿಯಂಚಿನಲ್ಲಿ
ಮೂಡದೇ ಮತ್ತೆ ಮಡಿಯದಿರು..
ಅಷ್ಟೇ...
"ಮಡದಿಯಾಗದೇ ಮಡಿದೆ ನಿಜ.
ReplyDeleteಮುಂದೆಂದೂ ಲೇಖನಿಯಂಚಿನಲ್ಲಿ
ಮೂಡದೇ ಮತ್ತೆ ಮಡಿಯದಿರು.."
ಸಾಲುಗಳು ಇಡೀ ಕವನದ ಸರ್ವಸ್ವವನ್ನು ಸಾದ್ರೀಕರಿಸಿದೆ.
http://badari-poems.blogspot.in
ಧನ್ಯವಾದಗಳು ಸರ್.. :)
Deleteಕೊಟ್ಟು ಕವನವೇ ಚಂದವಿದೆ..
ReplyDeleteಆದರೂ ಕೊನೆ ಮೂರು ಸಾಲುಗಳು ಹೆಚ್ಚೆಚ್ಚು ಅನ್ನುವಷ್ಟು ಚಂದವಿದೆ... ಕಾಡುತ್ತಿದೆ...
ಅಬ್ಬಾ ತುಂಬಾ ಚೆನ್ನಾಗಿದೇರಿ.... :)
ReplyDeleteನೆಲಸವರಿದ ಕೆಂಪುದಾವಣಿಯಂಚು
ಕೊಂಚ ತೋಯ್ದಿತ್ತು..
ನಿನ್ನೆ ಜಾತ್ರೆಯಲ್ಲಿ ಕೊಂಡ
ಹಳದಿಗಾಜಿನ ಬಳೆಗಳಿಗೆ
ಒರಗಿ ನಿದ್ರಿಸಲೊಂದು
ಹೊಸ ಕೈ ಸಿಕ್ಕಿದ ಸಂಭ್ರಮವಿತ್ತು..! ತುಂಬಾ ಇಷ್ಟವಾದ ಸಾಲುಗಳು....
ಪ್ರತೀ ಸಾಲುಗಳೂ ಮನಸಿಗೆ ನಾಟಿತು...
ಅದರಲ್ಲೂ ಕೊನೆಯ ಸಾಲುಗಳು ಮನಸಲ್ಲಿ ಉಳಿಯಿತು....
ಥ್ಯಾಂಕ್ ಯೂ.. ಮೌನರಾಗದೊಡತಿಯವರೆ.. ಹಾಗೂ ಕಾವ್ಯಾ ಜೀ :)
ReplyDeleteವಿಶೂ,
ReplyDeleteಗೆಳತಿ ಕೊಟ್ಟ ಲಿಂಕ್ ಒತ್ತಿ ನೋಡಬಂದರೆ
ಇಲ್ಲಿ ಭಾವಧಾರೆ..
ಮಳೆಗಾಲ ಮುಗಿಯುತ್ತ
ಚಳಿಯ ಹೊಸ್ತಿಲಲ್ಲಿ ಎಲೆ ಉದುರಲು ಕಾಯುವಾಗ
ಸಿಕ್ಕ ಈ ಧಾರೆಯಲ್ಲಿ
ಮನಸ್ಸು ಒದ್ದೆ ಒದ್ದೆ ನವಿರು.
ಇಷ್ಟ ಆಯ್ತು ಬರಹ.
ಸಿಂಧು
http://nenapu-nevarike.blogspot.in/
Really nice liked it :)
ReplyDeleteಸುಷುಪ್ತಿಯಲ್ಲಿ ಅಳಿಯದಂತಹ ಕವಿತೆಯಾಗಿಸಿರುವಿರಿ ನಿಮ್ಮ ಸುಷುಮ್ನಳನ್ನು!! ತುಂಬಾ ತುಂಬಾ ಇಷ್ಟವಾಯಿತು!!!
ReplyDeletehttp://manasa-hegde.blogspot.in/