About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, February 2, 2012

ಹಾಯ್ಕುಗಳು:

* ನೀನು ನನ್ನ ಬಾಳಿಗೆ ಬೆಳಕಾಗಿ ಬಂದಿದ್ದಕ್ಕಿಂತ
  ಈ ಟಾರ್ಚಿಗೆ ಶೆಲ್ಲಾಗಿ ಬಂದಿದ್ದರೆ ಚೆನ್ನಾಗಿರ್ತಿತ್ತು..
  ಕರೆಂಟ್ ಇಲ್ಲ ಇಲ್ಲಿ.. ಅರ್ಜೆಂಟ್ ಟಾಯ್ಲೆಟ್ಟಿಗೆ ಹೋಗಬೇಕು ನಾನು..!

* ಮನುಷ್ಯ ಬುದ್ಧಿಜೀವಿಯಾಗುವುದನ್ನು ಬಯಸದ ಜನರೆಂದರೆ
  hair dye ಕಂಪೆನಿಯ ಮಾಲೀಕರು..!

* ಇಂಕಿನ ಹನಿಯೊಂದು ಆಗಷ್ಟೇ ಜಾರಿಬಿದ್ದ ಘಳಿಗೆ.
  ಅಂತಿಂಥ ಸಂದರ್ಭವಲ್ಲ ಅದು..
  ವ್ಯಾಸ ಮಹಾಭಾರತಕ್ಕಿಟ್ಟ ಕೊನೆಯ Full stop ಹನಿ ಅದು..!!

* ಸತ್ಯ ಹೇಳದಿದ್ದರೆ ತಲೆ ಸಾವಿರ ಹೋಳಾಗುವುದು ಎಂದು
  ಆ ಬೇತಾಳ ಹೇಳಿದ ಒಂದೇ ಒಂದು ಸುಳ್ಳು..
 "ವಿಕ್ರಮಾದಿತ್ಯ-ಬೇತಾಳ" ಪುರಾಣವನ್ನೇ ಸೃಷ್ಟಿಸಿದ್ದು ಸೋಜಿಗ..!

* ನ್ಯಾಯಾಂಗಕ್ಕೂ ಮರ್ಮಾಂಗಕ್ಕೂ ಇರುವ ಹೋಲಿಕೆ..
  ಎರಡೂ ಕಡೆ V.I.P ಗಳದ್ದೇ ಕಾರುಬಾರು..!

* ಯಾಕೆ? ಏನು? ಎಲ್ಲಿ? ಹೇಗೆ?
  ಎನ್ನುವ ಪದಗಳು..
  ಮನುಷ್ಯಕುಲ ನಶಿಸಿದರೂ ಉತ್ತರವಾಗದೇ
  ಬರಿಯ ಪ್ರಶ್ನೆಗಳಾಗೇ ಉಳಿದು ಹೋಗುವುದು ಅತ್ಯಂತ ಘೋರ ಸಂಗತಿ..!

2 comments:

  1. ನೀನು ನನ್ನ ಬಾಳಿಗೆ ಬೆಳಕಾಗಿ ಬಂದಿದ್ದಕ್ಕಿಂತ
    ಈ ಟಾರ್ಚಿಗೆ ಶೆಲ್ಲಾಗಿ ಬಂದಿದ್ದರೆ ಚೆನ್ನಾಗಿರ್ತಿತ್ತು..
    ಕರೆಂಟ್ ಇಲ್ಲ ಇಲ್ಲಿ.. ಅರ್ಜೆಂಟ್ ಟಾಯ್ಲೆಟ್ಟಿಗೆ ಹೋಗಬೇಕು ನಾನು..!" - ಹ್ಹ ಹ್ಹ ಹ್ಹ, ನಿಮ್ ಡವ್ವನ್ನ ಕ್ಯಾಂಡಲ್ ಆದ್ರೂ ಮಾಡ್ಕೊ ಬಹುದಿತ್ತು. ಪಾಪ ಅತ್ತಿಗೆ....

    ReplyDelete
  2. ಹಾಯ್ಕಗಳಲ್ಲೂ ನಿಮ್ಮ ಶೈಲಿಯನ್ನು ಕಾಯ್ದುಕೊಂಡಿದ್ದೀರಿ.. ನಗುವುಕ್ಕಿಸಿದವು ವಿಶ್ವಣ್ಣ.. ಚೆಂದ ಇವೆ ಹಾಯ್ಕಗಳು..:)))

    ReplyDelete