About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Sunday, January 15, 2012

'ಶೇಷ'ಕವನ

ಬಹುಷಃ ಇವೆಲ್ಲಾ ನಾವು,ನೀವು ಎಲ್ಲೋ ಒಂದು ಸಾರಿ ದಾಟಿ ಬಂದಿರುವಂಥದ್ದೇ.. ವಿಶೇಷವಿಲ್ಲದ, ಹೆಕ್ಕಬಹುದಾದ ನೆನಪುಗಳ 'ಶೇಷ'ಕವನ ಎನ್ನಬಹುದು ಇದನ್ನ....

ಓತಿಕ್ಯಾತಕ್ Torture ಕೊಟ್ಟೆ..
ಸಗಣಿ ಮುದ್ದೇಲ್ ಪಟಾಕಿ ಇಟ್ಟೆ..
ನೀರಲ್ ಬೋಂಡ ಬೇಯ್ಸಕ್ ಹೋದೆ..
ಹೇನು,ಜೇನು ಒಂದೇ ಅನ್ಕಂಡೆ..!

ಬಾಟ್ಲಿ ಕ್ಯಾಪಲ್ ಗಾಡಿ ಮಾಡ್ದೆ..
ವಾಸ್ನೆ ಸಾಕ್ಸಿಗ್ ಸೆಂಟ್ ಹೊಡ್ಕಂಡೆ..
ಹಲ್ಲಿ ಬಾಲ Cut Cut ಮಾಡ್ದೆ..
ನಲ್ಲಿ ನೀರು ಬಿಟ್ಟು ಓಡಿದ್ದೆ..

ಬುಕ್ಕಿನ್ ರಟ್ಟಲ್ ಕ್ರಿಕೆಟ್ ಆಡ್ದೆ..
ತಿಪ್ಪೆ ನಾಯಿಗ್ ಕಲ್ಲಲ್ ಹೊಡ್ದೆ..
ಸುರು ಸುರು ಕಡ್ಡಿ ಮರಕ್ಕೆ ಎಸ್ದೆ..
ರಾಮನ ವೇಷ್ದಲ್ ಹುಡುಗೀರ್ಗ್ ಕಣ್ ಹೊಡ್ದೆ..!

ತಪ್ಪಿ ಲೇಡೀಸ್ ಟಾಯ್ಲೆಟ್ಗೋದೆ..
ತಿರುಗೋ ಫ್ಯಾನಿಗ್ ಕೈ ಹಾಕ್ ನಿಲ್ಸ್ದೆ..
Friends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!

ಅಲ್ಲಿಗೆ ಬಾಲ್ಯ ಮುಗ್ದೇ ಹೋಯ್ತು..
ಕೆಲ್ಸ,ಹೆಂಡ್ತಿ, ಮಗುವೂ ಆಯ್ತು..
ಮಗನೂ ಹಂಗೇ ಮಾಡ್ತಿರ್ತಾನೆ..
ಹಳೆಯ ನೆನಪಿನ್ ವಾರಸ್ದಾರ ಹುಟ್ಟೇ ಬಿಟ್ನಲ್ಲ..!

3 comments:

 1. ಎಲ್ಲ ಸರಿ ವಿಶು ಕೊನೆಯ ಪ್ಯಾರ ಬುಟ್ಟು ಉಳಿದ ಎಲ್ಲದರ ಕಡೆ ನೋಡ್ದಾಗ
  Friends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
  ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!
  ಎಲ್ಲೂ ಎರಡು consecutive line ಗಳ ನಡುವೆ ಸಂಬಂದ ಇಲ್ದೆ ಇದ್ರೂ ಇಲ್ಲಿ ಮಾತ್ರ ನೇರ ಇದೆ ಅಲ್ವ? any reason?

  ReplyDelete
  Replies
  1. ಹೌದಲ್ವ..! ನಾನೂ ಈಗ್ಲೇ ನೋಡಿದ್ದು ಸಚಿನಾ.. :)

   Delete
 2. ತುಂಬಾ ಚೆನ್ನಾಗಿದೆ.. ಕೆಲವು ನಾನೂ ಮಾಡಿದ್ದೇನೆ.

  ReplyDelete